Tags

, ,

ವರುಣನಿಗೆ ಇಳೆಯ ಮೇಲೆ ಪ್ರೇಮ ಹೆಚ್ಚಾಗಿತ್ತು. ಭೋರ್ಗರೆದು ಅವಳ ಮಡಿಲು ಸೇರುತ್ತಿದ್ದ. ಇವರಿಬ್ಬರು ಅದೇ ಹಳೆಯ ಆಲದ ಮರದಡಿಯಲ್ಲಿ ಮತ್ತೆ ಭೇಟಿಯಾಗಿದ್ದರು. ಆಕೆ ಸಪ್ಪಗಿದ್ದಳು. ಈತ ಕೈಯಲ್ಲೊಂದು ಸಿಗರೇಟು ಹಿಡಿದು ಚಡಪಡಿಸುತ್ತಿದ್ದ. ಇವನ ಪ್ರೇಮನಿವೇದನೆಯನ್ನು ನಿರಾಕರಿಸಿದ್ದವಳು ಅಚಾನಕ್ಕಾಗಿ ಏನನ್ನೋ ಹೇಳಬೇಕೆಂದು ಬರಹೇಳಿದ್ದಳು.ಇವಳೇ ಮೌನಮುರಿದು ಹೇಳಿದಳು, “ನಾನು ಈ ಜನ್ಮದಲ್ಲಿ ತಾಯಿಯಾಗುವುದಿಲ್ಲ. ಹಾಗಾಗಿ ನಿನ್ನ ಒಪ್ಪಲು ಸಾಧ್ಯವಿಲ್ಲ”.

ಇವನು ಯೋಚಿಸಿದ. ಸ್ವಾರ್ಥವಿಲ್ಲದ ಪ್ರೇಮಕ್ಕೆ ಅರ್ಥವಿಲ್ಲವೆಂದು ನಿಶ್ಚಯಿಸಿ ಹೇಳಿದ, “ಪರ್ವಾಗಿಲ್ಲ! ನಿನಗೆ ಗಂಡನೂ ಮಗನೂ ನಾನೇ ಆಗುತ್ತೇನೆ”. ಈ ನೆಪದಲ್ಲಾದರೂ ಅವಳೊಂದಿಗೆ ತನ್ನ ಉಳಿದ ಜೀವನ ಕಳೆಯಬೇಕೆಂದು ಮನಸ್ಸಿನಲ್ಲೇ ಹೇಳಿಕೊಂಡ.