Tags

, , , , , , ,

ವಿಶೇಷ ಸೂಚನೆ: ನಾನು ಈ ಲೇಖನವನ್ನು ಪೂರ್ವಗ್ರಹಪೀಡಿತನಾಗಿ ಬರೆಯುತ್ತಿಲ್ಲ. ಸಿನಿಮಾವನ್ನು ನೋಡಿದ ನಂತರ ನನಗನ್ನಿಸ್ಸಿದ್ದನ್ನು ಇಲ್ಲಿ ದಾಖಲಿಸಿದ್ದೇನೆ. ಮತ್ತು ಹೀಗೆ ಬರೆಯಲು ನನಗೆ ಅಧಿಕಾರವೂ ಇರುತ್ತದೆ ಏಕೆಂದರೆ ಐವತ್ತು ರೂಪಾಯಿ ನೀಡಿ ನಾನು ಸಿನಿಮಾ ನೋಡಿರುತ್ತೇನೆ. ಇನ್ನೊಂದು ಸಂಗತಿ, ಅಪ್ಪು ಎಂದು ಪ್ರೀತಿಯಿಂದ ಕರೆಯಲ್ಪಡುವ ಪುನೀತ್ ರಾಜ್ ಕುಮಾರ ಅವರ ಹಾಗೂ ದುನಿಯಾ ಚಿತ್ರದ ನಿರ್ದೇಶಕ ಸೂರಿಯ ಅಭಿಮಾನಿ ನಾನು.

ಸ್ನೇಹಿತರೆಲ್ಲ ನಿರ್ಧರಿಸಿ ನಿನ್ನೆ, ಅಂದರೆ ಕ್ರಿಸ್ತಶಕ ೨೦೧೨ ನೇ ಇಸವಿ ಮೇ ತಿಂಗಳಿನ ೪ನೇ ತಾರೀಖು ಶುಕ್ರವಾರ ಸಾಯಂಕಾಲ ಅಲ್ಲಲ್ಲಾ ರಾತ್ರಿ ೮ ಗಂಟೆ ಪ್ರದರ್ಶನಕ್ಕೆಂದು ಮಂಗಳವಾರ ಬಿಡುಗಡೆ ಕಂಡ ಕನ್ನಡ ಸಿನಿಮಾ ಅಣ್ಣಾಬಾಂಡ್ ಸಿನಿಮಾಕ್ಕೆ ಹೋದದ್ದು ಇವತ್ತಿಗೆ ಇತಿಹಾಸ. ಆದ್ರೆ ನಿನ್ನೆ ಏನಾಯ್ತು(ಏನ್ ನೋಡಿದ್ವಿ) ಅಂತ ನನಗೆ ನೆನಪಿಲ್ಲ. ಸಿನಿಮಾಗಳ ಬಗ್ಗೆ ಬರೆಯೋದು ನನಗೆ ಸುತಾರಂ ಇಷ್ಟ ಇಲ್ಲ. ಆದರೂ ನಮ್ಮಪ್ಪನ ಐವತ್ತು ರೂಪಾಯಿ ದಂಡ ಮಾಡಿದ್ದಕ್ಕೆ ಈ ಲೇಖನ.

ಮೊದಲನೆಯದಾಗಿ ದುನಿಯಾದಂತಹ ಕ್ಲಾಸಿಕ್ ಸಿನಿಮಾ ತೆಗೆದ ಸೂರಿಯವರೇ, ಕಥೆ ಚಿತ್ರಕಥೆ ಸಂಭಾಷಣೆ ಅಂತ ಟೈಟಲ್ ಕಾರ್ಡ್ ಅಲ್ಲಿ ತೋರಿಸ್ತೀರಲ್ಲಾ, ಚಿತ್ರದ ಕಥೆ ಏನು ಅಂತ ದಯವಿಟ್ಟು ಯಾವುದಾದ್ರೂ ಒಂದು ಮೂರು ಬಿಟ್ಟ ಸುದ್ದಿವಾಹಿನಿಗಳಲ್ಲಿ ಬಂದು ವಿವರಿಸಿ. ಪುಣ್ಯ ಬಂದರೂ ಬರಬಹುದು. ಒಂದು ಸಿನಿಮಾ ಮಾಡಿ ನಿಮ್ ಟ್ಯಾಲೆಂಟ್ ತೋರಿಸಿದ್ರಲ್ಲಾ, ನಿಮ್ ಮುಂದಿನ ಸಿನಿಮಾಗಳ ಮೇಲೆ ಜನರಿಗೆ ಜಾಸ್ತಿ EXPECTATION ಇರುತ್ತೆ. ಅದರರ್ಥ ಇನ್ನೂ ಚೆನ್ನಾಗಿ ತಗೀರಿ ಅಂತ ಅಲ್ಲಾ. ATLEAST ಹಿಂದಿನ ಸಿನಿಮಾ ಅಷ್ಟಾದ್ರೂ ಇರಲಿ ಅಂತ. ನಿಮ್ ಸಿನಿಮಾದಲ್ಲಿ (ಅಣ್ಣಾಬಾಂಡ್) ಬರುವ ಪಾತ್ರಗಳು ಏನೇ ಮಾತಾಡಿದ್ರೂ ಜನ ನೋಡ್ತಾರೆ ಅಂದ್ಕೊಂಡು ಸಂಭಾಷಣೆ ಬರೀತೀರಾ ನೀವು..? ಸಾಧ್ಯ ಆದರೆ ಉತ್ತರ ಕೊಡಿ. ಇನ್ನೊಂದು ಮಾತು, ಬೇರೆ ಸಿನಿಮಾ ಇಂಡಸ್ಟ್ರಿ ಮತ್ತು ಕನ್ನಡದವರೇ ಆದ ಕೆಲವು ನಿರ್ದೇಶಕರನ್ನು ಆಡ್ಕೊಂಡಿದೀರಲ್ಲಾ, ಆ ಅಧಿಕಾರ ನಿಮಗೆ ಕೊಟ್ಟವರು ಯಾರು..? ಸಿನಿಮಾ ವ್ಯವಹಾರಕ್ಕೂ ಮೀರಿ ಒಂದು ಕಲೆ. ಗ್ರಾಫಿಕ್ಸ್ ತೋರಿಸಿದ್ರೆ ಕಣ್ ಕಣ್ ಬಿಟ್ಕೊಂಡು ನೋಡ್ತೀವಿ ಅಂದ್ಕೊಡಿದ್ರೆ ದಯವಿಟ್ಟು ಮೊದಲು ಅದರಿಂದ ಆಚೆ ಬನ್ನಿ. ಅಣ್ಣ ಬಾಂಡ್ ಬೈಕ್ GHOST RIDER ಕಾಪಿ ಅಂತ ಎಲ್ಲರಿಗೂ ಗೊತ್ತು. ಆದ್ರೆ, ಕೆಲವು ದೃಶ್ಯಗಳು ಆ ಸಿನಿಮಾದಂತೆಯೇ ಇದ್ವು. ಯಾಕೆ!!? ನಿಮ್ಮಿಂದ ಕನ್ನಡ ಚಿತ್ರರಂಗಕ್ಕೆ ಒಂದು ಹೆಸರು ಬರುತ್ತೆ ಅಂದ್ಕೊಂಡಿದ್ವಿ, ನಿರಾಸೆ ಮಾಡಿದ್ರಿ!!!

ಮಾನ್ಯ ಹರಿಕ್ರಿಷ್ಣ ಅವರೇ, ಮತ್ತೆಲ್ಲೂ ಕದಿಯೋಕೆ ಸಿಗಲಿಲ್ಲಾ ಅಂತ, ನೀವು ಮಾಡಿದ ಸಂಗೀತವನ್ನೇ ಕದ್ದು ಮತ್ತೆ ಅದೇ ಹಳೇ ಸರಕನ್ನು ನಮ್ಗೆ ಕೊಟ್ಟೀದಿರಾ!! ಮ್ಯೂಸಿಕ್ಕೆ ಸರಿ ಇಲ್ಲ ಏಳೇ ಸ್ವರ, ಇನ್ನೆಷ್ಟು ಕೂಗೋದು ಎಮ್ಮೆ ಥರ ಅಂತ ಯಾವುದೋ ಒಂದು ಧಾರವಾಹಿಯಲ್ಲಿ ನೀವೇ ಹಾಡಿದ್ದೀರ ನೆನಪಿದ್ಯಾ? ದಯವಿಟ್ಟು ನಿಮ್ಮ ಧ್ವನಿ ಕೇಳೋಕೆ ಆಗಲ್ಲಾ, ಇನ್ಮುಂದಾದ್ರೂ ಹಾಡಬೇಡಿ. ಟೈಟಲ್ ಸಾಂಗ್ ಜಾಕಿ ಸಿನಿಮಾದ ಟೈಟಲ್ ಸಾಂಗಿನಂತೆಯೇ ಇತ್ತು. ತುಂಬಾ ನೋಡ್ಬೇಡಿ, ಚಿಂಗಾರಿ ಸಿನಿಮಾದ ತಲೆಕೆಟ್ಟ ಹಾಡಿನಂತಿತ್ತು.

ಹಾಡು ಬರೆಯೋಕೆ ಬರಲ್ಲಾ ಅಂದ್ರೂ ಬರೀತಿನಿ ಅನ್ನೋ ಮಗು ತರ ಹಾಡು ಬರೆಯೋ ಹೆಣ್ಮನಸಿನ ಅಂಕಲ್, ನಿಮ್ಮ ಜೊತೆಯಲ್ಲೇ ಇರುವ ಜಯಂತ್ ಕಾಯ್ಕಿಣಿ ಅವರಿಂದ ಸ್ವಲ್ಪ ಕಲೀರಿ. ನಿಮ್ಮ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಒಂದನ್ನು ಬಿಟ್ಟಿ, ಯಾವ್ ಹಾಡೂ ಮತ್ತೆ ಮತ್ತೆ ಕೇಳೋ ಹಾಗಿಲ್ಲ!!

ದಯವಿಟ್ಟು ಪ್ರೇಕ್ಷಕರಿಗೆ ಅಂದರೆ ನನ್ನಂತಹವರಿಗೆ ಸಿನಿಮಾ ಮಾಡಿ. ಇಲ್ಲ ATLEAST ನಿಮಗೋಸ್ಕರನಾದ್ರೂ ಮಾಡಿ. ಅದನ್ನು ಬಿಟ್ಟು, ನಾಯಕನಿಗೋಸ್ಕರ ಸಿನಿಮಾ ಮಾಡಬೇಡಿ. ಜಯಂತ್ ಕಾಯ್ಕಿಣಿ ಅವರ ಒಂದು ಸಾಂಗು, ಸತ್ಯ ಹೆಗ್ಡೆ ಅವರ ಛಾಯಗ್ರಹಣ, ಮತ್ತು ಸಾಹಸ ದೃಶ್ಯಗಳಿಗೆ ಮಾತ್ರ ಹಣ ತಗೊಂದು ಉಳಿದಿದ್ದನ್ನು ದಯವಿಟ್ಟು ಹಿಂದಿರುಗಿಸಿ!!

ಅಭಿಮಾನಿಗಳನ್ನೇ ದೇವರು ಅಂದ್ಕೊಂಡಿದ್ದ ಮೇರು ನಟನ ಮಗ ನೀವು, ದಯವಿಟ್ಟು ಈ ತರಹದ ಸಿನಿಮಾಗಳನ್ನು ಒಪ್ಕೊಬೇಡಿ ಅಪ್ಪು ಅವರೆ. ನಿಮ್ಮ ಅಭಿನಯದ ಬಗ್ಗೆ ಎರಡು ಮಾತಿಲ್ಲ, ಆದ್ರೆ ಕತೆನೇ ಇಲ್ಲದ ಸಿನಿಮಾದಲ್ಲಿ ನಟಿಸುವುದು, ಉಸಿರೇ ಆಡದ ಗೊಂಬೆಯೊಂದಿಗೆ ಮದುವೆ ಆದಂತೆ, ಚೆನ್ನಾಗಿರಲ್ಲ!!

ಕೊನೆ ಮಾತು: ಮೊದಲ ಅರ್ಧದಲ್ಲಿ ಒಂದು ಕೊಲೆ ನಡೆಯುತ್ತೆ. ಅದಕ್ಕೂ ಕತೆಗೂ ಏನು ಸಂಬಂಧ ಅಂತ ಹೇಳ್ತೀರ ಪ್ಲೀಸ್

ಇಂತಿ ನಿಮ್ಮ ಸಿನಿಮಾ ನೋಡಿ ಬೇಸರಗೊಂಡ ಅಭಿಮಾನಿ

Advertisements