Tags

, , , , ,

ಪ್ರೀತಿಯ P,

ನಿಮ್ ಹೆಸರ್ ಬರೆಯೋಕೆ ಏನೋ ಒಂಥರಾ. ಬೇಜಾರು ಮಾಡ್ಕೋಬೇಡಿ ಆಯ್ತಾ?.ಈ ಲೆಟರ್ ನ ಯಾಕ್ ಬರೆದೆ, ಹೇಗ್ ಬರೆದೆ, ನಿಮಗೇ ಯಾಕೆ ಕೊಡ್ತಾ ಇದೀನಿ ಅಂತ ನಿಮಗೆ ಗೊತ್ತಿರೋಕೆ ಸಾಧ್ಯಾನೇ ಇಲ್ಲಾ ಯಾಕಂದ್ರೆ mostly ನೀವು ನನ್ನನ್ ಇದೇ ಮೊದಲನೇ ಸಲ ನೋಡ್ತಾ ಇರೋದು ಅನ್ಸುತ್ತೆ. ದೇವರಾಣೆಗೂ ಈ ಲೆಟರ್ ನ ನಿಮಗೆ ಅಂತಾನೇ ಬರೆದಿದ್ದು. ಪೂರ್ತಿ ಓದಿ ಪ್ಲೀಸ್.ಇದೂ ಕೂಡ ನಿಮಗೆ ಕೊಡಲಾಗದೇ ಇರೋ ಲೆಟರ್. ಆದ್ರೆ ನಿಮಗೆ ಅಂತಾನೆ ಬರೆದದ್ದು. ಏನ್ ಮಾಡಲಿ, ಮನಸ್ಸಿನಲ್ಲಿರೋದ್ದನ್ನೆಲ್ಲಾ ಹೇಳೋ ಧೈರ್ಯ ಆ ದೇವರು ಇನ್ನೂ ಕೊಟ್ಟಿಲ್ಲ. ನಿಮಗೋಸ್ಕರ ಇರೋ ಕನಸೆಲ್ಲಾನೂ ನಿಮ್ಮ ಮುಂದೆ ನಿಂತು ಹೇಳಬೇಕು ಅಂತ ಆಸೆ, ಆದ್ರೆ, ಇನ್ನೂ ಸ್ವಲ್ಪ ದಿನ ಕಾಯಬೇಕು.ಇದು ನಿಮಗೋಸ್ಕರ ಬರೆಯುತಿರುವ ಎರಡನೇ ಲೆಟರ್.ಇದನ್ ಹೇಗೋ ಧೈರ್ಯ ಮಾಡಿ ನಿಮಗೆ ಕೊಡ್ತೀನಿ. ನೀವು ಸೀದಾ ಮನೆಗೆ ಹೋಗಿ, ನಿಮ್ ರೂಮ್ ಬಾಗಿಲು ಹಾಕ್ಕೊಂಡ್, ಯಾವುದೋ ಬುಕ್ಕಲ್ಲಿಟ್ಟಿರೋ ಈ ಲೆಟರ್ ನ ತಗೊಂಡು ಓದೋಕ್ ಶುರು ಮಾಡ್ತೀರ.

“ನಿಮ್ಮನ್ ನೋಡಿದ ಮೊದಲನೇ ದಿನ ಅಂದ್ರೆ ಅಕ್ಟೋಬರ್ 26 ಇನ್ನೂ ಹಾಗೇ ನೆನಪಿದೆ. ನಿಮ್ ಪಾಡಿಗೆ ನೀವು ಎಲ್ಲಿಗೋ ಹೋಗ್ತಾ ಇದ್ರಿ, ನಾನು ನನ್ ಪಾಡಿಗೆ ಎಲ್ಲೋ ಹೋಗ್ತಾ ಇದ್ದೆ, ನೀವು ಯಾಕೇ ಅಂತ ಗೊತ್ತಿಲ್ಲ ಸಡನ್ನಾಗಿ ಹಿಂದೆ ತಿರುಗಿದ್ರಿ. ನೀವು ನನ್ ನೋಡಿದ್ರೋ ಬಿಟ್ರೋ ಗೊತ್ತಿಲ್ಲ ಆದ್ರೆ ನಾನಂತು ನಿಮ್ಮನ್ ನೋಡಿದೆ. You looked so cute ಗೊತ್ತಾ?. ಅವತ್ತಿಂದ ಶುರುವಾಯ್ತು ನೋಡಿ ಹಾಳಾಗಿದ್ ನಮ್ ಜೀವನ ಸರಿಯಾಗೋ ಕಾರ್ಯ. ತುಂಬಾ ಧನ್ಯವಾದಗಳು.ಜೀವನದಲ್ಲಿ ಮೊದಲನೇ ಸಲಾ, ಮದ್ವೆ ಅಂತಾದ್ರೆ ನಿಮ್ಮನ್ ಮದ್ವೆ ಆಗಬೇಕು ಅನಿಸಿತು. ನೀವು ಅಂದ್ರೆ ನಂಗೇ ತುಂಬಾ ಇಷ್ಟ. ಯಾಕಂದ್ರೆ ಮೊದಲು ಕಾಣೋದು ನಿಮ್ ಅಂದ. ನೀವೇನೂ ಸುರಸುಂದರಿ ಏನಲ್ಲಾ, ಆದರೆ ನಂಗೆ ನೀವು ಅದೇ!!!. ನಿಮ್ ಪಾಡಿಗೆ ನೀವಿರೋದು,ಬಸ್ಸಲ್ಲಿ ವಿಂಡೊ ಸೈಡ್ ಕೂತು ಹೊರಗಡೆ ನೋಡೋದು,ನಾನ್ ಬಂದಾಗ ಕೆಲವೊಮ್ಮೆ ವಿಂಡೊ ಕ್ಲೋಸ್ ಮಾಡೋದು, ಕೆಲವೊಮ್ಮೆ ನನ್ನ ನೋಡೋದು. ಇದೆಲ್ಲಾ ತುಂಬಾ ಇಷ್ಟ. ಅವತ್ತೊಂದು ದಿನ ಯಾಕೇ ಅಂತ ಗೊತ್ತಿಲ್ಲ, ನೀವು ಬಸ್ಸಲ್ಲಿ ಅಳ್ತಾ ಇದ್ರಿ, ನಾಮ್ ನಿಮ್ಮನ್ ನೋಡಿದೆ, ನೀವ್ಯಾಕೆ ನನ್ನ ನೋಡಿ ಕಣ್ಣ್ ಒರೆಸ್ಕೊಂಡ್ರಿ?. ನೀವು ನನ್ನ ನೋಡದೇನೂ ಒರೆಸಿಕೊಂಡಿರಬಹುದು, ಆದ್ರೆ ನಂಗೆ ಹಾಗನಿಸಿತು. ಯಾಕ್ರೀ ಅಳ್ತಾ ಇದ್ರೀ?. ನಿಮ್ ಕಣ್ಣಲ್ಲಿ ಒಂದ್ ಹನಿ ಬರದೇ ಇರೋ ಹಾಗೆ ನೋಡ್ಕೋತೀನಿ. ಚಾನ್ಸ್ ಕೊಡ್ತೀರಾ ಅಲ್ವಾ?”

“ಐ ಲವ್ ಯೂ”

ನೋಡಿ ನೀವು ಒಪ್ಪಲಿಲ್ಲ ಅಂದ್ರೆ ನಂಗೇನೂ ಬೇಜಾರಿಲ್ಲ. ನೀವು ಸಿಗಲಿಲ್ಲ ಅಂತ ಗೊಳೋ ಅಂತ ಅಳ್ತಾ ಕೂರಲ್ಲ, ಇಲ್ಲಾ ಶ್ರೀನಗರ ಕಿಟ್ಟಿ ಥರ ಬಾರ್ ಗೆ ಹೋಗಲ್ಲ. ನೀವಿಲ್ದೇನೂ ನಾ ಬದುಕಿರ್ತಿನಿ, ಆದ್ರೆ ನೀವೂ ನನ್ ಜೊತೆಲಿದ್ರೆ ಬ್ಲ್ಯಾಕ್ ಅಂಡ್ ವೈಟ್ TV ಥರ ಇರೋ ನಮ್ ಜೀವನ ಕಲರ್ TV ಆದ್ರೂ ಆಗಬಹುದು. ನೀವು ಒಪ್ಪಲೇಬೇಕು ಅಂತೇನಿಲ್ಲ, ಯಾಕಂದ್ರೆ ನಿಮಗೂ ನಿಮ್ಮದೇ ಆದ ಕನಸುಗಳಿರುತ್ತೆ ಅಲ್ವಾ?. ತುಂಬಾ urgent ಏನಿಲ್ಲ. ನೀವು ಟೈಮ್ ತಗೊಂಡು ಹೇಳಿ. ಅಲ್ಲಿವರೆಗೂ ಕಾಯೋ ತಾಳ್ಮೆ ನನಗಿದೆ. ಆದ್ರೆ ತುಂಬಾ ಲೇಟ್ ಮಾಡಬೇಡಿ ಪ್ಲೀಸ್.ಉಫ್!! ಲೆಟರ್ ನ ಓದಾಗುತ್ತೆ. ನೀವು ಫುಲ್ ಇಂಪ್ರೆಸ್ ಆಗಿ ಈ ಲೆಟರ್ ನ ಹಂಗೇ ತೆಗೆದು ಬುಕ್ಕಲ್ಲಿ ಇಡ್ತೀರ. ರಾತ್ರಿಯಾಗುತ್ತೆ. ನೀವು ನಿದ್ದೆ ಮಾಡೋಕೆ ಅಂತ ಹೋಗ್ತೀರ. ಆದ್ರೆ ನಿದ್ದೆ ಬರಲ್ಲ. ಯಾವಾಗ ಬೆಳಗ್ಗೆ ಆಗುತ್ತೋ ಅಂತ ಕಾಯ್ತಾ ಇರ್ತೀರ. ಕನಸಲ್ಲೊಂದು ಅರ್ಧ ಗಂಟೆ ನನ್ನ ನಿಮ್ಮ ಸಂಭಾಷಣೆ ನಡೆಯುತ್ತೆ. ಹಾಗೇ ಬೆಳಗ್ಗೇನೂ ಆಗುತ್ತೆ. ಮತ್ತೆ ಅದೇ ಕೆಂಪ್ ಬಸ್ ಹತ್ತಿ ಕಾಲೇಜಿಗೆ ಬರ್ತೀರ, ಬಂದ್ ತಕ್ಷಣ ನನ್ ನೋಡಿ, “ಐ ಲವ್ ಯು ಟೂ” ಅಂತೀರ. ಆಮೇಲೆ ನಮ್ಮ ಜೀವನ, ಪ್ರತಿ ಸಮಯ ಸರಸಮಯ.

ಆಮೇಲೆ ನಮ್ಮಿಬ್ಬರ ಓದು ಮುಗಿಯತ್ತೆ. ನಮ್ಮನೇಲಿ ನಿಮ್ಮನೇಲಿ ಎರಡೂ ಕಡೆ ನೋ ಪ್ರಾಬ್ಲಂ. ಮೂರು ನಾಲ್ಕು ವರ್ಷ ಆದ ಮೇಲೆ ನಮ್ಮಿಬ್ರಿಗೂ ಮದುವೆಯಾಗುತ್ತೆ. ಯಪ್ಪಾ!!! ಏನ್ ಕನಸುಗಳು… ಕನಸು ಕಾಣೋಕೇನ್ ದುಡ್ಡ್ ಕೊಡಬೇಕಾ?. ನಿಮ್ಮನ್ ನೋಡದೇ ಇರೋ ಪ್ರತಿ ಕ್ಷಣಾನೂ ಹೀಗೇ ಕನಸು ಕಾಣ್ತಾ ಇರ್ತೀನಿ. ಕನಸು ಇನ್ನೂ ಬಾಕಿ ಇದೆ.. ಆದ್ರೆ ಬೇಡ ಬಿಡಿ.ನೀವು ಒಪ್ಪಿದರೆ, ಈ ಭೂಮಿ ಮೇಲಿರೋ ಎಲ್ಲಾ ಖುಷಿನೂ ನಿಮಗೆ ನೀಡೋ ಆಸೆ. ನಿಮ್ ಯಾವುದೇ ಕನಸುಗಳು ನನಸಾಗದೇ ಇರೋಕೆ ನಾನ್ ಬಿಡಲ್ಲಾ. ನೀವು ಯಾವಾಗಲೂ ನಗ್ತಾ ಇರಬೇಕು. ನಿಮ್ ಕೈ ಬೆರಳಿನ ಜೊತೆ ನನ್ ಕೈ ಬೆರಳು ಆಟ ಆಡ್ತಾ ಇರಬೇಕು. ನೀವು ರಾತ್ರಿ ಮಲಗಿರುವಾಗ, ನಿಮ್ಮನ್ ನೋಡೋಕೆ ಅಂತಾನೇ ನಾನು ಮಧ್ಯರಾತ್ರೀಲಿ ಎದ್ದಿರಬೇಕು. ನಿಮಗೋಸ್ಕರ ನೀವು ಕೇಳಿದ ಹಾಡನ್ನು ನಾ ಹಾಡಬೇಕು. ನೀವು ನಾನ್ ಚೆನ್ನಾಗಿ ಹಾಡಲಿಲ್ಲ ಅಂತ ಮತ್ತೆ ಮತ್ತೆ ಹಾಡಿಸಬೇಕು. ನಾನು ಬೇರೆ ಹುಡುಗಿ ನೋಡಿದ್ರೆ ನೀವು ತುಂಬಾ ಕೋಪ ಮಾಡ್ಕೋಬೇಕು. ನಾನ್ ಒಂದ್ ನೂರು ಸಾರಿ ಕ್ಷಮೆ ಕೇಳಿದ ಮೇಲೆ ನೀವು ನನ್ನನ್ನು ಕ್ಷಮಿಸಬೇಕು. ಇದೆಲ್ಲಾದ್ದಕ್ಕೂ ಅವಕಾಶ ಕೊಡ್ತೀರಾ ಅಲ್ವಾ?.

ಯಾಕೆ ಅಂತ ಗೊತ್ತಿಲ್ಲ, ಇತ್ತೀಚಿಗೆ ತುಂಬಾ ಇಷ್ಟ ಆಗ್ತಾ ಇದೀರ ನೀವು. ದಿನಕ್ಕೊಮ್ಮೆ ನಿಮ್ಮನ್ ನೋಡಲಿಲ್ಲ ಅಂದ್ರೆ ತುಂಬಾ ಬೇಜಾರಾಗುತ್ತೆ. ನೀವೆಲ್ಲಿ ನಂಗೆ ಬರಿ ಸ್ಫೂರ್ತಿಯಾಗೇ ಉಳ್ಕೋಬಿಡ್ತೀರ ಆಂತ ಭಯ ಆಗ್ತಾ ಇದೆ. ಜೊತೇಲೂ ಇರ್ತೀರ ಅಲ್ವಾ?…

“ಐ ಲವ್ ಯೂ”

ಇಂತಿ ನಿಮ್ಮ ಪ್ರೀತಿಯ

ಸಂತು 🙂

Advertisements